" ಮರೆಯಾದಂತೆ ನೀನು ಈ ನನ್ನ ಕಣ್ಣೆದುರಿಂದ , ಮರೆ ಮಾಡಲಾರೆ ನಿನ್ನ ನಾ ಈ ನನ್ನ
ಮನದಿಂದ
ಮರು ಘಳಿಗೆಯಲ್ಲಾದರೂ ಸರಿ, ಮರು ಜನ್ಮದಲ್ಲಾದರೂ ಸರಿ ಕಾಯುವೆ ನಿನಗಾಗೇ ನಾ ಕಾತುರದಿಂದ"..
ಮರು ಘಳಿಗೆಯಲ್ಲಾದರೂ ಸರಿ, ಮರು ಜನ್ಮದಲ್ಲಾದರೂ ಸರಿ ಕಾಯುವೆ ನಿನಗಾಗೇ ನಾ ಕಾತುರದಿಂದ"..
-----------------------------------------------------------------------------------------------
"
ಬಾಳ ದಾರಿಯಲ್ಲಿ ನೀ ಜೊತೆಗಿದ್ದರೆ
ಸಾಕು,
ನೆನಪುಗಳ ಹೊತ್ತಿಗೆಯ ಮೂಟೆ ಕಟ್ಟಿ ಅಟ್ಟಕ್ಕೆ ಹಾಕುವೆ "
ನೆನಪುಗಳ ಹೊತ್ತಿಗೆಯ ಮೂಟೆ ಕಟ್ಟಿ ಅಟ್ಟಕ್ಕೆ ಹಾಕುವೆ "
-------------------------------------------------------------------------------------------------------
"ಹೊತ್ತು ಮುಳುಗಿದಾಗ,ಸುತ್ತ ನೀನಿರದಾಗ,
ಸತ್ತ ಸಮಯವೊಂದೆ ಜೊತೆಯಾದಾಗ,
ಎತ್ತ ಹೋಗಲಿ ನಾ.....ಗೆಳತಿ.........??"
----------------------------------------------------------------------------------------------------------------
" ತೆರೆದಿಟ್ಟ ಪುಸ್ತಕದ ಮೂಲೆಯಲ್ಲೆಲ್ಲೋ
ನಿನ್ನ ಹೆಸರ ಗೀಚಿದ ನೆನಪು,...
ನನಗೇನು ಗೊತ್ತಿತ್ತು ಅದು ಮೂಡುವುದೆಂದು ಈ ನನ್ನ ಹೃದಯದ ಗೋಡೆಯ ಮೇಲಕೂ "!!...
---------------------------------------------------------------------------------------------------------------
No comments:
Post a Comment