Saturday 26 October 2013

ಸ್ಮಾರ್ಟ್ ಫೋನ್.... ಅನ್ನೋ sexy ಲೇಡಿ...



ಸ್ಮಾರ್ಟ್ ಫೋನ್.... ಅನ್ನೋ sexy ಲೇಡಿ... 
ಇದನ್ನ ತಮಾಷೆಗಾಗಿ ಬರೆದಿದ್ದು, ನನ್ನೊಬ್ಬ ಫ್ರೆಂಡ್ ಏನಾದ್ರು ಡಿಫರೆಂಟ್ ಆಗಿ ಬರಿ ಅಂದ ಅದಕ್ಕಾಗಿ ಒಂದು ಸಣ್ಣ try ಅಷ್ಟೇ.






                     ಏನು ಈ ತರ ತಲೆಬರಹ ಕೊಟ್ಟಿದೀನಿ ಅನ್ಕೊಂಡ್ರ. smart ಫೋನ್ ಅಂದ ಕೂಡಲೇ ಎಲ್ರು ಒಂದ್ಸಲ ನಿಮ್ ನಿಮ್ ಜೇಬಿಗೆ ಕೈ ಹಾಕಿ ಫೋನ್ ಇದಿಯಾ ಅಂತ ನೋಡ್ಕೊಂಡ್ರ..!! ಸರಿ ಮುಂದೆ ಕೇಳಿ ನನ್ ಪಿಟೀಲ್ ನ....

ಈಗಂತೂ ಯಾರ ಕೈಲಿ ನೋಡಿದ್ರು smart phones. ಜೇಬಲ್ಲಿ 10 ರೂಪಾಯಿ ಇರತ್ತೋ ಇಲ್ವೋ, ಸಿಮ್ ಕಾರ್ಡ್ ಲಿ ನಯಾ ಪೈಸೆ balance ಇರತ್ತೋ ಇಲ್ವೋ ಗೊತ್ತಿಲ್ಲ but ಕೈಲಿ ಮಾತ್ರ ಫೋನ್ ಇರಲೇಬೇಕು. ಕೆಲವರಿಗೆ prestige ವಿಷ್ಯ ಆದರೆ. ಇನ್ನ ಕೆಲವರಿಗೆ ಸುಮ್ನೆ ...... ಕ್ಕೆ ಅಷ್ಟೇ. 
ಪಕ್ಕದಲ್ಲಿ ನಿಂಬೆ ಹಣ್ಣಿನಂತ ( ಕೇವಲ punchಗಾಗಿ ಬಳಸಿದ್ದು) ಹುಡುಗಿ ಇದ್ರೂ ನಿಮಿಷಕ್ಕೊಂದ್ಸಲ ಜೇಬಲ್ಲಿರೋ smart ಹುಡುಗಿನ ನೋಡಿಲ್ಲ ಅಂದ್ರೆ ಸಮಾಧಾನ ಇರಲ್ಲ. ಅವುಗಳು ನೋಡೋಕೆ ಬೇರೆ ಒಳ್ಳೆ ತೆಳ್ಳಗೆ ,ಬೆಳ್ಳಗೆ,  handy ಆಗಿ ಇರ್ತವೆ. ಇನ್ನು ಅದು ಸ್ವಿಚ್ ಆಫ್ ಆಗಿದ್ರೂ ಒಂದ್ಸಲ screen ಟಚ್ ಮಾಡಿ ನೋಡೋದು. ಸತ್ತು ಹೋದೋರ ಮುಂದೆ ಕುತ್ಕೊಂಡು ಅಳ್ತಾರಲ್ಲಾ ಹಾಗೆ. ಅದು on ಆಗಲ್ಲ , ಇವ್ರು ಬಿಡಲ್ಲ.

ಅದಕ್ಕೆ ತಕ್ಕಂತೆ ನಮ್ ಗೂಗಲ್ ಮಹಾರಾಜರು develop ಮಾಡಿರೋ android ಬೇರೆ. ಅದಕ್ಕೆ ಸಪೋರ್ಟ್ ಮಾಡೋ ಲಕ್ಷಾಂತರ ಬಿಟ್ಟಿ apllicationಗಳು. ಯುವಜನತೆ ಎಲ್ಲಾ ಈ SMS ಅನ್ನೋ ಬೂತದಿಂದ ಹಾಳಾಗಿ ಹೋಗ್ತಾರೆ ಅಂತ TRAI ಅವ್ರು SMS ನ stop ಮಾಡಿದ್ರೆ. whatsapp ಬಂದು ಎಲ್ರುನ್ನು ಮತ್ತೆ whats_up ಅನ್ನೋ ಹಾಗೆ ಮಾಡಿದೆ. ಇನ್ನ LINE app line ಹೊಡಿಯೋರ್ಗೆ ಹೇಳಿ ಮಾಡ್ಸಿದ್ ಹಾಗೆ ಇದೆ. ಇನ್ನೂ ಆ temple ಇಂದ ಓಡಿ ಹೋಗೋ , ಕೋಳಿ ಮೊಟ್ಟೆ ಒಡಿಯೋ
ಆಟ ಎಲ್ರ ಹಾಟ್ fevt. ತಿನ್ನೋಕೆ ಹಣ್ಣು ಕೊಟ್ರೆ ಮುಖ ಇನ್ನೊಂದ್ ಕಡೆ ತಿರುಗಿಸೋ ಮಕ್ಳು, FRUIT NINJA ಹಾಕಿ ಕೊಟ್ರಂತು ಹೊಟ್ಟೆ ತುಂಬೋವಷ್ಟು ಆಡ್ತಾವೆ.

ಹೋಗೋ ಟೈಮ್ ಅಲ್ಲಿ ದೇವರ ನಾಮ ಕೇಳ್ಕೊಂಡು, ಮೊಮ್ಮಕ್ಳು ಜೊತೆ ಆಡ್ಕೊಂಡು ಇರೋ ಮುದುಕರನ್ನು ಮೋಡಿ ಮಾಡೋವಂತ addಗಳು. ಇನ್ನು ನಮ್ಮಂತ ಬಿಸಿ ರಕ್ತ ಕೊತ ಕೊತ ಕುದಿತಿರೋ ಹೈಕಳು ಸುಮ್ನಿದ್ರೆ ಆಗತ್ತಾ!!!!!!! ಕೈಲಿ ಒಂದು smart ಫೋನ್ ಇದ್ರೆ ಸಾಕು ನಾವು ತುಂಬಾ smart ಅನ್ನೋ ಮನೋಭಾವನೆ.

ಸ್ವಲ್ಪ ಒಗ್ಗರಣೆ::

ಇಷ್ಟೆಲ್ಲಾ ಹೇಳಿದ್ಮೇಲೆ ನಾನೂ ಸುಮ್ನಿದ್ರೆ ಆಗುತ್ತಾ...!!!( ಬಿಸಿ ರಕ್ತ ಬೇರೆ ಆದ್ರೆ ಜಾಸ್ತಿ ಕುದೀತ ಇಲ್ಲ) ಕೈ ಕೈ ಹಿಡ್ಕೊಂಡು ಹೋಗೋ ಹುಡುಗಿ ಸಿಗ್ತಾಳೋ ಇಲ್ವೋ ಗೊತ್ತಿಲ್ಲಾ ಸಧ್ಯಕ್ಕೆ  but ಕೈಲಿ ಹಿಡ್ಕೊಂಡು ಹೋಗೋ ಒಂದು sexy lady ನಾದ್ರೂ ತಗೋಳೋದು ಬೇಡ್ವ.......????!!!!!
ಏನಂತೀರಾ...???


ಹನಿಗವನಗಳು.....



ಹನಿಗವನಗಳು.....

ನಿನ್ನ ಸುತ್ತ ನಾ ಸುತ್ತಲಿಲ್ಲ ನಿಜ,
ಆದರೆ ಈ ನನ್ನ ಮನ ನಿನ್ನ ಸುತ್ತಾನೆ ಗಿರಗಿಟ್ಲೆ ಹೊಡೀತಿತ್ತು,
ಮೊದಲೇ ನಾ ನಿನಗೆ ಸಿಗಬಾರದಿತ್ತೆ ಅಂತ ಅನಿಸಿದ್ದು ನಿಜ,
ಸಿಕ್ಕರೂ ನೀ ನನ್ನ ಒಪ್ಪುತ್ತಿಯಾ ಅಂತ ಅನುಮಾನ ಕಾಡಿತ್ತು,
ನಿನ್ನ ಅರಿವಿಗದು ಬಾರದಿರಬಹುದು- ನಿಜ,
ಬಂದರೂ ನಟಿಸುತ್ತಿದ್ದೆಯೇನೋ ನನಗೇನು ಗೊತ್ತು..
ಎಲ್ಲಾ ಹೇಳಬೇಕೆಂದಿದ್ದೆ ನಿಜ,
ನೀ ತಿರಸ್ಕರಿಸಿದರೆ ಎಂಬಾ ಭಯವೂ ಇತ್ತು,
ಕೊನೆಗೂ ಹೇಳಬೇಕೆಂದು ನಿರ್ಧಾರವೇನೋ ಮಾಡಿದ್ದೆ ನಿಜ,
ಅಷ್ಟರಲ್ಲಾಗಲೇ ಕಾಲವೆಂಬುದು ಮಿಂಚಿ ಹೋಗಿತ್ತು........

 ------------------------------------------------------------------------------------------

ಹೊರಲಾರದಷ್ಟು ಭಾರ ಹೊರೆಸಿದ್ದೀಯ,
ಕೆಳಗಿರಿಸಬಾರದೆಂದೇನಿಲ್ಲಾ,
ಕೆಳಗಿಳಿಸಿದರೆ ಎಲ್ಲಿ ಕಳೆದುಕೊಳ್ಳುತ್ತೇನೋ ಎನ್ನುವ ಭಯ,
ಭಾರದ ಅಡಿ ಬಿದ್ದು ಕೊನೆಯುಸಿರೆಳೆದರೂ
ಚಿಂತೆಯಿಲ್ಲಾ,
ನಾ ಹೋದರೆ ನಿನ್ನ ನನ್ನಷ್ಟು ಇಷ್ಟ ಪಡುವವರು ಯಾರು ಅನ್ನುವ ಸಂಶಯ,..!!

-------------------------------------------------------------------------------------------

ನನ್ನ ಮತಿಗಿಂದು ಮರೆಗುಳಿಗೆ ಬೇಕಿದೆ
ನಿನ್ನ ನೆನಪುಗಳ ಮರೆಯುವ ಸಲುವಾಗಿ,
ನನ್ನ ಮನದಲ್ಲಿ ಒಂದು ಪುಟ್ಟ ಗುಡಿ ಕಟ್ಟಬೇಕಿದೆ,
ನೀ ಕೊಟ್ಟ ಪ್ರೀತಿಯ ಸಲುವಾಗಿ...


Thursday 24 October 2013

ಇಂದು – ಅಂದು::



ಇಂದು ಅಂದು::

                 ಹೀಗೆ ಎಂಟು ತಿಂಗಳ ಹಿಂದೆ fb ನಲ್ಲಿ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯಾರದು ಅಂತ ನೋಡಿದ್ರೆ ನನ್ನ ಒಬ್ಬ ಹಳೇ ಸ್ನೇಹಿತನದ್ದು. ಅದೂ ಸುಮಾರು 8 ವರ್ಷಗಳ ನಂತರ.  ತಕ್ಷಣಕ್ಕೆ ಗುರುತಿಸಿದೆನಾದರು ಆಶ್ಚರ್ಯ ಆಗಿತ್ತು. ಈ fb ಎಂಬ ಪ್ರಪಂಚದಲ್ಲಿ ಅದೂ 8 ವರ್ಷಗಳ ನಂತರಾನು ನೆನಪಿಟ್ಟುಕೊಂಡು ರಿಕ್ವೆಸ್ಟ್ ಕಳಿಸಿದ್ದನ್ನ ಕಂಡು ಖುಷಿಯಾಗಿತ್ತು. ನಾವಿಬ್ಬರು ಒಂದರಿಂದ ಏಳನೇ ತರಗತಿವರೆಗೆ ಒಟ್ಟಿಗೆ ಓದಿದವರು. ನಮ್ಮಿಬ್ಬರ ಸ್ನೇಹ ಶಾಲೆಯಲ್ಲಷ್ಟೇ ಅಲ್ಲ ,ಊರಿನಲ್ಲೂ ಸ್ವಲ್ಪ ಫೇಮಸ್ ಅಂತಾನೆ ಹೇಳಬಹುದು. ವೀಕೆಂಡ್ಸ್ ಬಂದ್ರೆ ಸಾಕು ನಾನು ಅವ್ರ ಮನೇಲಿ ಹಾಜರ್. ನಂಗೆ ಬೆಕ್ಕುಗಳೆಂದರೆ ಇಷ್ಟ. ಅವ್ರ ಮನೆ ತುಂಬಾ ಬೆಕ್ಕುಗಳಿದ್ದವು. ಅದಕ್ಕೋಸ್ಕರ ಹೋಗ್ತಿದ್ದೆ. ಅವ್ರ ಮನೆ ಮುಂದೆ ಅಡಿಕೆ ತೋಟ . ಅಲ್ಲಿ ಒಂದು ಓಪನ್ ಬಾವಿ. ಎಲ್ಲಾ ಕಾಲದಲ್ಲೂ ತುಂಬಿ ಹರಿಯುತ್ತಾ ಇರ್ತಿತ್ತು. ಇಬ್ರು ಅದ್ರಲ್ಲಿ ಮೀನು ಹಿಡಿತಿದ್ವಿ and ತೋಟದಲ್ಲಿ ಮಾವಿನ ಮರ,ಪೇರಲೆ ಮರ ಇದ್ವು . ಇದ್ಮೇಲೆ ಕೇಳ್ಬೇಕ ಕಾಲಕಾಲಕ್ಕೆ ಹಣ್ಣುಗಳು ಸಿಗ್ತಾ ಇದ್ವು.

ಅವ್ನು ಕಳ್ಸಿದ್ ರಿಕ್ವೆಸ್ಟ್ accept ಮಾಡಿದ್ಮೇಲೆ ನಂಬರ್ ಇಸ್ಕೊಂಡು ಕಾಲ್ ಮಾಡಿದೆ. ಕೇಳ್ದೆ ನನ್ನ ಹೇಗೆ ಹುಡುಕಿದೆ ಅಂತ. ಅವ್ನು ಹೇಳಿದ್ ಕೇಳಿ ಏನ್ ಹೇಳಬೇಕೋ ಗೊತ್ತಾಗ್ಲಿಲ್ಲ. ಅವ್ನ ಫ್ರೆಂಡ್ ಯಾರೋ ಹೇಳಿದರಂತೆ fb ನಲ್ಲಿ ಅಕೌಂಟ್ create ಮಾಡಿದ್ರೆ ಹಳೇ ಫ್ರೆಂಡ್ಸ್ ನೆಲ್ಲಾ ಹುಡುಕಬಹುದು ಅಂತ. ಅದಕ್ಕೋಸ್ಕರ ಅಕೌಂಟ್ create ಮಾಡಿ ನನ್ನ ಹೆಸರಿನ ಎಲ್ಲಾ combination ಹುಡುಕಿ ನಂಗೆ ರಿಕ್ವೆಸ್ಟ್ ಕಳಿಸಿದ್ದ. ನಾನು fb ಅಕೌಂಟ್ ಓಪನ್  ಮಾಡಿ 4 ವರ್ಷ ಆದರೂ ಒಂದಿನ ಅವನನ್ನ search ಮಾಡಿರಲಿಲ್ಲ .
ಅವ್ನ ಮಾತು, ಅವನಿಗೆ ನನ್ ಮೇಲೆ ಇದ್ದ ಆ ಸ್ನೇಹ ಇನ್ನು ಹಾಗೆ ಇತ್ತು. ಅವ್ನ ಮಾತಿನ ಶೈಲಿನೂ ಅಷ್ಟೇ.
ಆಗ ನಂಗೆ ಅನ್ನಿಸ್ತು ನಾನು ಎಷ್ಟು ಚೇಂಜ್ ಆಗಿದೀನಿ ಲೈಫ್ ನಲ್ಲಿ. ಅವ್ನು ನಾನು almost ಒಂದೇ ತರ mentality ಹೊಂದಿದ್ವಿ . ಆದ್ರೆ ಈಗ ನಾನು ತುಂಬಾ ಬದಲಾಗಿದೀನಿ ಅನ್ನಿಸ್ತು.

ಹೀಗೆ ನೆನ್ನೆ ಇನ್ನೊಬ್ಬ ಫ್ರೆಂಡ್ ನನ್ ನಂಬರ್ ಕೇಳಿ ಕಾಲ್ ಮಾಡಿದ್ದ . ಅವ್ನು ಅಷ್ಟೇ ಬಹುಶಃ 9 ವರ್ಷ ಆಗಿರಬಹುದು ಅವನನ್ನ ನೋಡದೆ. ಅದಕ್ಕೋಸ್ಕರ fb ಗೆ ಧನ್ಯವಾದಗಳನ್ನ ಹೇಳಲೇಬೇಕು.

ಯಾಕೆ ಈ ಕಥೆ ಹೇಳ್ದೆ ಅಂದ್ರೆ. ಅವಾಗ ಜೀವನ ಅಂದ್ರೆ ಏನು, ಸ್ನೇಹ ಅಂದ್ರೆ ಏನು  ಅಂತ ಗೊತ್ತಿಲ್ದೆ ಇದ್ದ ವಯಸ್ಸಿನಲ್ಲಿ ಆದ ಸ್ನೇಹ ಇನ್ನು ಹಾಗೆ ಇದೆ. ಆದ್ರೆ ಪ್ರಪಂಚ ಜ್ಞಾನ ಬಂದ ಮೇಲೆ ಆದ ಸ್ನೇಹ, ಸ್ನೇಹಿತರು, ಅವ್ರ ಜೊತೆಗಿದ್ದ ದಿನಗಳು , ನನ್ನ ನೋವು ನಲಿವನ್ನೆಲ್ಲ ಹಂಚಿಕೊಂಡು, ಒಂದೇ  ಜೀವ ಎರಡು ದೇಹ ಅನ್ನೋ ಹಾಗೆ ಇದ್ದ ಸ್ನೇಹ.  24*7  ಮೆಸೇಜ್ , ಕಾಲ್ , missed ಕಾಲ್ಸ್ ,forward messages, ಎಲ್ಲಾ ಕೇವಲ ಕೆಲವೇ ತಿಂಗಳುಗಳ ಅಂತರದಲ್ಲಿ ನೆನಪುಗಳ ಪುಟ ಸೇರಿಯಾಗಿದೆ. ಒಂದು underwear ತಗೊಂಡರು ಶೇರ್ ಮಾಡ್ತಾ ಇದ್ದ ಸ್ನೇಹಿತರು ಈಗ ಏನಾದ್ರು important ಅನ್ನೋ ವಿಷ್ಯಾನು ತುಂಬಾ ಲೈಟ್ ಆಗಿ ಹೇಳೋದನ್ನ ನೋಡಿದ್ರೆ ಏನೋ ಒಂತರ ಅನ್ನಿಸಿಬಿಡತ್ತೆ. ಸಮಯ ಸವೆದಂತೆಲ್ಲಾ ಈ ಸ್ನೇಹ ಅನ್ನೋ ಸಂಬಂಧ ತುಕ್ಕು ಹಿಡಿದ ಕಬ್ಬಿಣದಂತಗ್ತಾ ಇರೋದನ್ನ ನೋಡಿದ್ರೆ ಏನು ಹೇಳಬೇಕೋ ಗೊತ್ತಾಗಲ್ಲ.


ನನ್ಮುಂದೆ ಬರೋ ಇನ್ನೊಂದು ಪ್ರಶ್ನೆ ಅಂದ್ರೆ. ಹೊಸಬರು ಲೈಫ್ ಗೆ entry ಆದಕೂಡಲೇ ಹಳೆದೆಲ್ಲಾ ಅಷ್ಟು easyಯಾಗಿ ಮರೆಯೋಕೆ ಸಾಧ್ಯನ ಅನ್ನೋದು..??!!. ಏನಾದ್ರು ಆಗ್ಲಿ ನನ್ ಫ್ರೆಂಡ್ಸ್ ನಂಗೆ ಬೇಕು ಅಂತ ಸುಮಾರು ಸ್ನೇಹಿತ /ತೆ ಯರುಗಳಿಗೆ  ಕಾಲ್ ಮಾಡಿದೆ. ಎಲ್ಲರಿಂದ ಬಂದ ಉತ್ತರ. ಏನು ಇಲ್ಲ, ಲೈಫೇ ಬೇಜಾರು, ಯಾರ್ friendship ಬೇಡ, ಯಾವ ಸಂಬಂಧಾನು ಬೇಡ, ಆರಾಮಾಗಿ ಇದೀನಿ , ಎಲ್ರು ಅವರವರ ಲೈಫ್ ಲಿ ಬ್ಯುಸಿ, ಯಾಕೆ disturb ಮಾಡೋದು ............... .  ಒಂದೇ ಉಸಿರಲ್ಲಿ ಎಷ್ಟೆಲ್ಲಾ ಹರಟೆ ಹೊಡಿತ ಇದ್ದೋರು. ಈಗ ಫ್ರೆಂಡ್ ship ಬೇಡ ಅಂತಿದಾರೆ ಅಂದಾಗ, ನಾನೇ ಕಾಲ್ ಮಾಡಿ ತೊಂದರೆ ಕೊಟ್ನೇನೋ ಅನ್ನಿಸ್ತು.  ಎಲ್ಲಾ ಮರಿಬೇಕು ಅಂದುಕೊಂಡೋರಿಗೆ ಮತ್ತೆ ನನ್ನ ನೆನಪು ಮಾಡಿ ಕೊಟ್ನೇನೋ ಅನ್ನಿಸ್ತು.

ಅದೇನೇ ಇರಲಿ ......ಬದಲಾವಣೆ ಅನ್ನೋದು natural. ಅದು ಕಾಲಕ್ಕೆ ತಕ್ಕಂತೆ ಆಗ್ತಾನೆ ಇರತ್ತೆ . ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು. ಆಗ ಈ ತರ ಯಡವಟ್ಟು ಪ್ರಶ್ನೆಗಳು ಯಾವುದು ಹುಟ್ಟಲ್ಲ ಅನ್ಸುತ್ತೆ.

ಏನಂತೀರಾ..............................???



Wednesday 23 October 2013

ಮೊದಲ ಮಾತು...,

ಮೊದಲ ಮಾತು....

ಮೊದ-ಮೊದಲು ಬೇರೆಯವರು ಬರಿಯೋ blog ನೋಡಿ ನಾನು ಒಂದು blog create ಮಾಡಿ ಏನಾದ್ರು ಬರಿಯೋಣ ಅಂತ ಅನ್ನಿಸಿತ್ತು. ಆದರೆ ಬೇಡ ಅಂತ ಸುಮ್ನಾದೆ. ಆದರೂ ಏನಾದ್ರು ಬರೀಬೇಕು ಅನ್ನೋ ಹುಚ್ಚು . ಏನು ಬರಿಯೋದು ಅಂತ ಮಾತ್ರ ಗೊತ್ತಿಲ್ಲ. ಏನಾದ್ರು ಆಗ್ಲಿ ಒಂದು blog create ಮಾಡೋಣ ಆಮೇಲೆ ನೋಡಿದರಾಯ್ತು ಅಂತ create ಮಾಡಿದೀನಿ.

ನನ್ನ ಆಲೋಚನೆಗಳಿಗೊಂದು ಬರಹದ ರೂಪ ಕೊಟ್ಟು ಇಲ್ಲಿ ಬರೆಯುವ ಪ್ರಯತ್ನ. ಹಾಗೆ ನಾನು ಗೀಚೋ ಕವಿತೆ ( ಅಂತ ನಾನು ಅಂದುಕೊಂಡಿದ್ದು ) ಗಳನ್ನ ಒಂದೇ ಕಡೆ ಸಂಗ್ರಹ ಮಾಡೋಣ ಅನ್ನೋದು ಒಂದು ಉದ್ದೇಶ. ಅದೇನೇ ಇರಲಿ
ಇಲ್ಲಿ ಏನೇ ಪೋಸ್ಟ್ ಮಾಡಿದ್ರು ಅದು ಕೇವಲ ನನ್ನ ಆಲೋಚನೆ , ಅಭಿಪ್ರಾಯ ಹಾಗೂ ಅನಿಸಿಕೆ ಅಷ್ಟೇ. ಇದನ್ನೆಲ್ಲಾ ಒಂದು ಡೈರಿಲಿ ಬರೀಬಹುದಿತ್ತಲ್ಲ ಅಂತ ಅನಿಸಬಹುದು. ಆದ್ರೆ ನಾನು ಬರೆದಿದ್ದನ್ನ ನಾಲ್ಕು ಜನ ಓದಲಿ ಅನ್ನೋ ಖಯಾಲಿ ಅಷ್ಟೇ .
(and ನಮ್ಮ ಗೂಗಲ್ನವರು free ಆಗಿ ಜಾಗ ಕೊಡೋವಾಗ ಸುಮ್ನೆ pen - notebook ಅಂತ ಯಾಕೆ ದುಡ್ಡು ಖರ್ಚು ಮಾಡೋದು ಅಂತ).

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ like ಮುಖಾಂತರ ಇಲ್ಲಾ comment ಮುಖಾಂತರ ಕೊಡಬಹುದು( ಇಷ್ಟ ಆದ್ರೆ ).
ಸಕಾರಾತ್ಮಕ , ನಕಾರಾತ್ಮಕ, ಕಾಲೆಳೆಯುವ , ನನ್ನನ್ನ ಅಟ್ಟಕ್ಕೆ ಏರಿಸುವ ಎಲ್ಲಾ ರೀತಿಯ commentಗಳಿಗೂ ಸುಸ್ವಾಗತ.

ಮುಂದಿನ ಬರಹದವರೆಗೂ ಸ್ವಲ್ಪ ವಿರಾಮ.