Monday 3 February 2014

ಕೊನೆಯ ಪುಟ ..(last page)::

ಕೊನೆಯ ಪುಟ ..(last page)::

ಈ ತಲೆಬರಹ ಕೇಳಿದ ಕೂಡಲೇ ಎಲ್ರು ಒಂದ್ಸಲ ನಮ್ ಪ್ರೈಮರಿ or ಹೈ ಸ್ಕೂಲ್ ಲೈಫ್ ಗೆ ಜಾರುವುದಂತು ಖಂಡಿತ. ನಿಜಾ ತಾನೇ...??!!!
ಪ್ರತಿಯೊಬ್ಬರಿಗೂ ಬರಿಯಲು ಇಷ್ಟ ಆಗುತ್ತಿದ್ದ ಜಾಗ ಅಂದ್ರೆ ನಮ್  notebook ನ ಕೊನೇ ಪುಟ. ನಮ್ಮ ಎಲ್ಲಾ ನೋವು , ನಲಿವು ಖುಷಿಯನ್ನು ಬರೆಯುತ್ತಿದ್ದ ಜಾಗ ಅದೇ. ಕ್ಲಾಸ್ ಬೋರ್ ಹೊಡಿತ ಇದ್ರೆ ಕೊನೆಯ ಪುಟವೇ ನಮ್ಮ ಟೈಮ್ ಪಾಸ್ ಗೆಳೆಯ (ಪಕ್ಕದಲ್ಲಿದ್ದವ್ರ ಜೊತೆ ಮಾತಾಡಿದ್ರೆ ಬೈತಾರೆ ಎಂಬ ಭಯ and ಆವಾಗ ಈ ಮೊಬೈಲ್ , ಗ್ಯಾಜೆಟ್ ಗಳ ಹಾವಳಿ ಇರಲಿಲ್ಲ).

ಎಲ್ಲೋ ನೋಡಿದ ಚಿತ್ರವನ್ನೋ, ಕ್ಲಾಸಿನ ಯಾವುದೊ ಹುಡುಗ/ಹುಡುಗಿಯಾ ಚಿತ್ರವನ್ನೋ , ಇಲ್ಲ ಪಾಠ ಮಾಡುವ ಟೀಚರ್ ನ ವ್ಯಂಗ್ಯ ಚಿತ್ರವನ್ನೋ ಬರೆಯವದವರಿಲ್ಲ ಅಂತಾನೆ ಹೇಳಬಹುದು. ಟೈಮ್ ಪಾಸ್ ನ ಚುಕ್ಕಿ ಆಟ , ಹೆಸರು ಬರಿಯೋ ಆಟಗಳು ಎಲ್ಲಾ ನಡೀತ್ತಿದ್ದದ್ದು last pageನಲ್ಲೇ. ನಮ್ಮ ಚಾಟ್ ನ whatsapp ಕೂಡಾ ಅದೇ ಪುಟಗಳು.  ಕೆಲವು ಟೀಚರ್ಸ್ ಗೆ ಹೇಳಿದ್ದನ್ನೇ ಹೇಳೋ ಅಭ್ಯಾಸವಿರುತ್ತದೆ. ನಮಗೆ ಆ ಪದವನ್ನು ಕೇಳಿ ಕೇಳಿ ತಲೆ ಕೆಟ್ಟಂತಾಗಿ ಕೊನೆಗೆ ಅವರು ಎಷ್ಟು ಸಲ ಅದನ್ನೇ ಹೇಳುತ್ತಾರೆ ಅಂತ ಲೆಕ್ಕ ಇಡೋ ಕೆಲಸ. ಈ  Xxtra curricular ಕೆಲಸಗಳಿಗೆಲ್ಲಾ ಕೊನೆ ಪುಟವೇ ಸಾಕ್ಷಿ.
( ನಾನು PUC ಓದಬೇಕಾದರೆ ಕನ್ನಡದ ಲೆಕ್ಚರರ್ ಗೆ ಈ ಅಭ್ಯಾಸ ಇತ್ತು. ನಾನು ನನ್ನ fnd ಮನೋಜ್ , ಇಲ್ಲ ಶ್ರೀಶ ಇಬ್ರು ಪಾಠ ಕೇಳೋದು ಬಿಟ್ಟು ಅವರು ಹೇಳುತ್ತಿದ್ದ "ಹೇಳ್ಕೊಂಡು ಹೋಗ್ತಾರೆ" ಅನ್ನೋ ಪದವನ್ನು ಲೆಕ್ಕ ಹಾಕುವುದೇ ಕೆಲಸ. ಒಮ್ಮೊಮ್ಮೆ ಲೆಕ್ಕ ತಪ್ಪುತ್ತಿದ್ದದ್ದು ಉಂಟು. ಯಾಕಂದ್ರೆ ಅವರು ಒಂದು ಘಂಟೆ ಅವಧಿಯಲ್ಲಿ ನೂರಕ್ಕೂ (100+ ) ಹೆಚ್ಚು ಬಾರಿ ಆ ಪದವನ್ನೇ ಪುನಾರಾವರ್ತನೆ ಮಾಡ್ತಾ ಇದ್ರು . ನೆನೆಸಿಕೊಂಡರೆ ಈಗಲೂ ನಗು ಬರತ್ತೆ.)

ಹಿಂದಿನ ದಿನ ನೋಡಿದ ಟಿವಿ ಪ್ರೊಗ್ರಾಮ್ ಚರ್ಚೆ , ತರಗತಿ ಮುಗಿದ ಮೇಲೆ ಮಾಡಬೇಕಾದ ಕೆಲಸಗಳು , ನಾಳೆ ಏನು ಮಾಡಬೇಕು ಅನ್ನೋ ವಿಚಾರಗಳು ಈ ಚಾಟ್ ನ ವಿಷಯ ಸಾಮಾಗ್ರಿಗಳು. ಇನ್ನೂ ಒಂದು ವಿಷ್ಯ ಅಂದರೆ ನಮಗೆ ಇಷ್ಟವಾದ ಹುಡುಗ/ಗಿ ಯಾ initialsನ ನಮ್ಮ initials ಜೊತೆ ಯಾರಿಗೂ ಗೊತ್ತಾಗದಂತೆ  ಬರೆದು ಅದರ ಸುತ್ತ ಏನೋ ಒಂದು ಚಿತ್ರ ಬಿಡಿಸಿ ಪ್ರೇಮದ ಸಂಕೇತವನ್ನು ಶಾಶ್ವತವಾಗಿಸುವ ಪ್ರಯತ್ನವೂ ಮಾಡಿದ್ದು. (ಬಹುಶಃ ಅನೇಕರು ಇದನ್ನಂತೂ ಮಾಡಿಯೇ ಮಾಡಿರುತ್ತೀರ). ಇದರಲ್ಲಿ ಗಮನಿಸಬೇಕಾದ ಅಂಶ ಅಂದರೆ ಆ ಹುಡುಗ/ಗಿ ಯ ಮೊದಲ ಅಕ್ಷರ ನಮ್ಮ ಹೆಸರಿನಲ್ಲಿದ್ದರೆ ಆ ಲೆಟರ್ ನ ಮಾತ್ರ capital ನಲ್ಲಿ ಬರಿತಾ ಇದ್ದದ್ದು.

ನನ್ಗೊಂತು last page ಅಂದ್ರೆ ಎಲ್ಲಿಲ್ಲದ ಪ್ರೀತಿ .ಈಗಲೂ ಅಷ್ಟೇ ಯಾವುದೇ ಬುಕ್ ಸಿಕ್ರೂ ಕೊನೆ page ನಲ್ಲಿ ನನ್ನೊಳಗಿನ ಕಲಾವಿದ ತನ್ನ ಕೈಚಳಕ ತೋರಿಸದೆ ಇರೋದಿಲ್ಲ.  ನನ್ನ b.e ಲೈಫ್ ಮುಗಿಯುವವರೆಗೂ ಈ ನನ್ನ (ಕೆಟ್ಟ) ಚಟ ಮುಂದುವರೆದುಕೊಂಡೆ ಇತ್ತು. ಇದಕ್ಕೆ ಸಾಕ್ಷಿ ನನ್ನ ಪಕ್ಕ ಕೂರುತ್ತಿದ್ದ 'ದೀಪಕ್ ಗೋರೆ'. ಅವನಿಗೆ ನನ್ನ ಬುಕ್ ಕೊಟ್ಟು ಕ್ಲಾಸ್ ನಲ್ಲಿ ಹೇಳೋದನ್ನ ಬರಿಯೋಕೆ ಹೇಳಿ , ನಾನು ಮಾತ್ರ ಅವನ ಬುಕ್ ನ last page ನಲ್ಲಿ ನನ್ನ ಚಿತ್ತಾರಗಳನ್ನ 'ಜಕಣಾಚಾರಿ' ತರ ಕೆತ್ತುತ್ತಾ ಇರ್ತಿದ್ದೆ ( ಅವನು ನೋಟ್ಸ್ ಬರ್ಕೊಳ್ತಿರ್ಲಿಲ್ಲ ಅನ್ನೋದು ಒಂದು ಕಾರಣ).

ಈಗಲೂ ಎಲ್ಲಾದರೂ ಹಳೇ ಪುಸ್ತಕ ಕೈಗೆ ಸಿಕ್ಕರೆ ನೋಡೋದು ಕೊನೆ ಪುಟವನ್ನೇ........

ಸತ್ಯ..,

No comments:

Post a Comment