Tuesday 28 January 2014

ಆ ಕಾಲದ ಮೊಬೈಲ್...



ಆ ಕಾಲದ ಮೊಬೈಲ್::

ಒಂದು ಕಾಲವಿತ್ತು . ಮೊಬೈಲ್ ಹಿಡಿದವನೆಂದರೆ ಆತ ಶ್ರೀಮಂತನೇ ಆಗಿರಬೇಕು. ಅದು ರಿಂಗಣಿಸಿದರೆ ಸಾಕು ಯಾರು ಕರೆ ಮಾಡಿದ್ದಾರೆ ಎಂಬುದು ಗೊತ್ತಿದ್ದರೂ ನಾಲ್ಕು ಜನ ತನ್ನತ್ತ ತಿರುಗಿ ನೋಡುವ ತನಕ ಅದರ ಪರದೆಯನ್ನೇ ದಿಟ್ಟಸಿ ನೋಡುತ್ತಾ (ಯಾರೋ CM , PM ಕಾಲ್ ಮಾಡಿದ ಹಾಗೆ) ನಂತರ ಫೋನ್ ಮಾಡಿದವರಿಗೂ ನೇರವಾಗಿ ಕೇಳಿಸುವಷ್ಟು ಎತ್ತರದ  ಧ್ವನಿಯಲ್ಲಿ ಚೀರುತ್ತಾ ಮಾತನಾಡಿದರೇನೆ ಏನೋ ಒಂದು ತರದ ಸಮಾಧಾನ. (ಈಗಲೂ ಕೆಲವರು ಹಾಗೆ ಮಾತನಾಡುವುದುಂಟು).

ನಂತರ ಮನೆಗೊಂದು ಮೊಬೈಲ್  - ಲ್ಯಾಂಡ್ ಲೈನ್ ಗೆ ಗುಡ್ ಬೈ concept ಬಂದಮೇಲೆ ಎಲ್ಲರ ಜೇಬಲ್ಲು ಒಂದೊಂದು ಮೊಬೈಲ್.  ಮಕ್ಕಳ ಕೈಯಿಂದ ದೂರವಿಡುತ್ತಿದ್ದರೂ ಬರಬರುತ್ತಾ ನೋಡ್ರಿ ನಮ್ ಮಗ ಮೊಬೈಲ್ ನ ಅರೆದು ಕುಡಿದ್ ಬಿಟ್ಟಿದಾನೆ-ಏನ್ ಬೇಕಾದರು ಹೇಳಿ operate ಮಾಡಿ ತೋರಿಸ್ತಾನೆ ಅನ್ನೋ ಮಟ್ಟಕ್ಕೆ ತಲುಪಿದ್ದು ಸುಳ್ಳಲ್ಲ.

ಇನ್ನು ಕಾಲೇಜು ಓದೋ ಹುಡ್ಗ ಹುಡ್ಗಿರ್ಗೆ ಮನೇಲಿ ಹೊಸ ಮೊಬೈಲ್ ಕೇಳಿದ್ರೆ ಕೊಡ್ಸೋದಿಲ್ಲ ಅಂತ ಗೊತ್ತು.
ಆದ್ರೂ ಕಮ್ಯುನಿಕೇಷನ್ ಗೆ ಏನಾದ್ರು ಒಂದು ಬೇಕಲ್ಲ (specially for lovers) ಅದ್ಕೆ ಮನೇಲಿ ಅಪ್ಪನದೋ ಅಮ್ಮನದೋ ಸೆಲ್ ನಂಬರ್ ಕೊಟ್ಟು ಅದ್ಕೆ miscalo - msg ಮಾಡೋಕೆ ಹೇಳೋದು. ಹೇಗಿದ್ದರು ಆಗೆಲ್ಲಾ ಅಪ್ಪ ಅಮ್ಮಂಗೆ msg ಓದೋಕೆ ಬರ್ತಾ ಇರ್ಲಿಲ್ಲ. ಕೇಳಿದ್ರೆ ಕಸ್ಟಮರ್ ಕೇರ್ ದು ಅಂತ (ಬಯ್ಯೋ) ನಾಟಕ ಮಾಡ್ಕೊಂಡು ಮೊಬೈಲ್ ನ ಕೈಲಿ ಹಿಡ್ಕೊಂಡು ಕೂತರೆ ಮುಗೀತು. ಇನ್ನು ಪ್ರಿಯ(ತಮೆ)ಕರ ನಿಂದ ಕಾಲ್ ಬಂದರಂತೂ ಅದೇ ಉತ್ತರ (ಈಗೀಗ ಹೆತ್ತವರಿಗೂ msg ಓದೋಕೆ ಬರೋದ್ರಿಂದ ಸ್ವಲ್ಪ ಕಷ್ಟ ಅಷ್ಟೆ).

ಮುಂದೆ ಮೊಬೈಲ್ ಅನ್ನೋದು roadside ಮಾರೋ ತರಕಾರಿಯಂತಾದ ಮೇಲೆ ಕೇಳ್ಬೇಕ...!! ಕಸ ಗುಡಿಸೋನಿಂದ ಹಿಡಿದು ಎಲೆಕ್ಟ್ರಿಕ್ ಕಂಬ ಹತ್ಕೊಂಡೋನ ಕಿವಿಯಲ್ಲೂ ಮೊಬೈಲು. ಅದ್ಕೆ ನಮ್ ಕವಿರಾಜ್ ಬರ್ದಿರೋ ಐಲು ಐಲು ಐಲು ಕೈಲಿದ್ರೆ ಮೊಬೈಲು ಹಾಡು ಕೇಳಿದ್ರೆ ಅರ್ಥ ಆಗತ್ತೆ. ಒಬ್ಬೊಬ್ರತ್ರ ಕನಿಷ್ಠ ಎರಡು ಮೂರು  ಮೊಬೈಲು. ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲ್ಗೊವರೆಗೂ ಅದು ಬೇಕೆ ಬೇಕು. ಒಂದ್ ನಿಮಿಷ ಬಿಟ್ಟಿದ್ರು ಏನೋ ಕಳ್ಕೊಂಡ feelings(ಕೆಲವರಿಗೆ).
ಅಂದಹಾಗೆ ನಾವು ಸ್ವಲ್ಪ ಈ ಐಲು ಮೊಬೈಲ್ freak ಆಗಿದ್ದೋರೆ.(ಈಗಲೂ ಸ್ವಲ್ಪ ಇದೆ ಹುಟ್ಟು ಗುಣ ಸುಟ್ರು ಹೋಗಲ್ಲ ಅಂತಾರಲ್ಲ ಹಾಗೆ).

ಏನೇ ಹೇಳಿ ಆ ಕದ್ದು- ಮುಚ್ಚಿ ,ಕಾಡಿ ಬೇಡಿ, ಬೈಸ್ಕೊಂಡು ,ಹೆದರ್ಕೊಂಡು ಮೊಬೈಲ್ use ಮಾಡ್ತಾ ಇದ್ದ ದಿನಗಳೇ ಮಜಾ ಅಲ್ವಾ.......!!!???

No comments:

Post a Comment