Thursday 23 January 2014

I Miss You.........................,



                       "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು" ಎಷ್ಟು ಅದ್ಭುತ ಸಾಲು ಅಲ್ವಾ..!!  ಎಲ್ಲರೂ ತಮ್ಮ  ಜೀವನದ ಒಂದಲ್ಲಾ  ಒಂದು ಹಂತದಲ್ಲಿ ನೆನಪಿಸಿಕೊಳ್ಳಲೇಬೇಕು. " ಮರೆತೆನೆಂದರೂ ಮರೆಯಲಿ ನಾ ಹ್ಯಾಂಗ" ಎಂಬಂತೆ ಎಲ್ಲರ ಜೀವನದಲ್ಲೂ ಮರೆಯಲಾಗದ ಒಬ್ಬ ವ್ಯಕ್ತಿ ಇದ್ದೆ ಇರುತ್ತಾನೆ. ಅದು ಪ್ರೇಮಿಯಾಗಿರಬಹುದು, ಪ್ರೇಯಸಿಯಾಗಿರಬಹುದು, ಗೆಳೆಯನಾಗಿರಬಹುದು, ಗೆಳತಿಯಾಗಿರಬಹುದು, ಸಹಾಯ ಮಾಡಿದವರಾಗಿರಬಹುದು, ಎಲ್ಲೋ ಹೀಗೆ ಬಂದು ಹಾಗೆ ಹೋದೋರಾಗಿರಬಹುದು.....ಇನ್ಯಾರೋ. ಹೃದಯದ ಬಾಗಿಲ ತಟ್ಟಿ ಹೋದೋರಿರಬಹುದು, ಬಾಗಿಲ ಬಳಿಯಲ್ಲೇ ನಿಂತು ಹೋದೋರಿರಬಹುದು, ಒಳ ಬಂದು -ಬಂದ ಬಾಗಿಲನ್ನೇ ಒದ್ದು ಹೋದೋರಿರಬಹುದು. ಒಟ್ನಲ್ಲಿ ಮೇಲಿನ ಪ್ರಶ್ನೆಗೆ 'ಇಲ್ಲ' ಎನ್ನುವ ಉತ್ತರ ತೀರ ಕಡಿಮೆ.

ಕೆಲವರು ಕಹಿ ನೆನಪುಗಳನ್ನ ನೀಡಿದರೆ, ಮತ್ತೆ ಕೆಲವರದು ಸವಿ ನೆನಪುಗಳು. ಆ ಕ್ಷಣದಲ್ಲಿ ಆ ಸಂದರ್ಭದಲ್ಲಿ ಅದು ನೋವು ತಂದಿದ್ದರೂ, ಮುಂದೊಂದು ದಿನ ಆ ದಿನಗಳನ್ನ ನೆನಪಿಸಿಕೊಳ್ಳೋ ದಿನ ಬಂದೆ ಬರುತ್ತದೆ ಎಂಬ ಅರಿವಿರುವುದಿಲ್ಲ. ಈಗ ನಾವೇ ನಮ್ಮ ಹಳೇ ಜೀವನದ ಪುಟಗಳನ್ನೇ ತಿರುವಿ ನೋಡಿದರೆ ಎಷ್ಟೋ ಘಟನೆಗಳು ತುಟಿಯ ಮೇಲೆ ನಗೆ ಚಿಮ್ಮುಸುತ್ತವೆ. ನಾವೆಲ್ಲಾ ಎಷ್ಟು ಸಿಲ್ಲಿ -ಸಿಲ್ಲಿಯಾಗಿ ವರ್ತಿಸುತಿದ್ವಿ ಅಂತ. ಯಾವುದೊ ಒಂದು ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತರೊಂದಿಗಿನ ಜಗಳ, ಮಾತಾಡಿಸಬೇಕೆಂದು ಮನಸ್ಸಿಗೆ ಅನಿಸುತ್ತಿದ್ದರೂ ಅರಿವಿಗೆ ಬಾರದ 'ego' ಪ್ರಾಬ್ಲಮ್. ತರಗತಿಯಲ್ಲಿ ಚಂದದ ಹುಡಿಗಿಯರ ಸುತ್ತ ಸುತ್ತುತ್ತಾ, ಅವರನ್ನ ರೇಗಿಸುತ್ತಾ ,ಅಳಿಸುತ್ತಿದ್ದ ಕಾಲ. ಮನೆಯಲ್ಲಿ ಅಕ್ಕ- ಅಣ್ಣನ ಜೊತೆಗೆ ಸುಖಾ -ಸುಮ್ಮನೇ ಜಗಳ. ಮಧ್ಯದಲ್ಲಿ ಅಮ್ಮನ enrty ಆಗಿ ಅಕ್ಕ ಅಥವಾ ಅಣ್ಣನಿಗೆ ಎರಡು ಪೆಟ್ಟು ಕೊಟ್ಟ ನಾಟಕವಾದ ಮೇಲೇನೆ ನಮ್ಮ ಅಳುವಿನ ನಾಟಕಕ್ಕೆ ಒಂದು ತರದ ಸಮಾಧಾನದ ತೆರೆ.

ಮುಂದೆ ಹದಿಹರೆಯಕ್ಕೆ ಕಾಲಿಡುತ್ತಲೇ ಎಲ್ಲೂ ಇಲ್ಲದ ನಾಚಿಕೆ, ಹುಮ್ಮಸ್ಸು, ಏನು ಬೇಕಾದರು 'ಕಿಸಿದು' ತೋರಿಸುತ್ತೇನೆ ಎಂಬ ಗೊಡ್ಡು ಧೈರ್ಯ. ಮನೆಯಲ್ಲಿ ತಂದೆ-ತಾಯಿಗಳು ಎಲ್ಲಿ ಮಕ್ಕಳು ಹಾದಿ ತಪ್ಪುತ್ತಾರೋ ಅಂತ ಚಿಂತಿಸುತ್ತಿದ್ದರೆ. ನಾವೋ ರೆಕ್ಕೆ ಬಲಿತ ಹಕ್ಕಿಯಂತೆ ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರೋ ಕನಸು ಕಾಣುತ್ತಿದ್ದದು. ಯಾರೋ ಸಿಗರೆಟ್ ಸೇದಿದರೂ ನಾವು ಸೇದುವಾಸೆ. ಯಾರೋ ಸೈಕಲ್ ನಲ್ಲೋ ,ಬೈಕ್ನಲ್ಲೋ wheeling ಮಾಡಿದ್ರೆ ನಮಗೂ ಮಾಡೋ ಆಸೆ. ಯಾರೋ ಹೀರೋ or heroin ನ ಅನುಕರಣೆ ಮಾಡಿದ್ರೆ ನಮಗೂ ಮಾಡೋವಾಸೆ. ಯಾರದ್ರು ಏನಾದ್ರು ಕೊಂಡುಕೊಂಡ್ರೆ ನಮಗೂ ಅದು ಬೇಕು ಅನ್ನೋ ಅಸೆ.

ಈ ಎಲ್ಲಾ ಚೆಲ್ಲಾಟ -ಹುಡುಗಾಟದ ಬದುಕಲ್ಲಿ ನಮಗೆ ಅರಿವಿಲ್ಲದಂತೆ ನಾವು ಯಾರಿಗೋ ಶರಣಾಗಿರ್ತಿವೀ. ಜೊತೆಯಿದ್ದಾಗ ಇದ್ಯಾವುದರ ಅರಿವಾಗುವುದಿಲ್ಲ. ಹೆಚ್ಚಿನ ಓದಿಗಾಗಿ ಮನೆ -ಮಠ ಎಲ್ಲಾ ಬಿಟ್ಟು ದೂರದ ಸ್ಥಳಕ್ಕೆ ಹೋದಾಗ, ಕೆಲಸಕ್ಕಾಗಿ ದೂರದ ಊರನ್ನು ಅರಸಿ ಹೋದಾಗ, ಮನಸ್ಸು ಏನನ್ನೋ ಮಿಸ್ ಮಾಡ್ಕೊತಿದೆ ಅನಿಸಿದಾಗ, i miss u ಅಂತ ಯಾರಿಗೋ ಹೇಳ್ಬೇಕು ಅನಿಸಿದಾಗ . ಆ ವಸ್ತು (ವ್ಯಕ್ತಿ) ವಿನ ನೆನಪಾಗುತ್ತದೆ. ಅವರನ್ನ ಮರೆಯದೆ ಇರೋದಕ್ಕೆ ಕಾರಣಗಳು ನೂರಿರಬಹುದು. ಆದ್ರೆ ಈ ಒಂದು ಕ್ಷಣ ಜೊತೆಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸದೆ ಇರದು. ನಾವು ಹಳೆದೆನ್ನೆಲ್ಲಾ ಮರೆತಿದ್ದೀವಿ, i just moved on in my life ಅನ್ನೋವಾಗಲೇ ಆ "ಹಳೆದು" ಅನ್ನೋ ವಿಷಯಗಳೆಲ್ಲಾ ಒಂದು ಸಾರಿ ನೆನಪಿನ ಪರದೆಯ ಮೇಲೆ ಬಾರದೆ ಇರದು. ಸಂಪೂರ್ಣವಾಗಿ ಅಳಿಸಿ ಹಾಕಲು ನಮ್ಮ ಮೆದುಳೇನು memory carde ಅಲ್ಲಾ ತಾನೆ.

ಹೀಗೆ ನಿಮ್ ಜೀವನದಲ್ಲೂ ಮರೆಯೋಕೆ ಆಗದೆ ಇರೋರು ಇದ್ರೆ ಒಂದ್ಸಲ ಹೀಗೆ ನೆನಪು ಮಾಡ್ಕೊಳಿ. ಮಿಸ್ u ಅಂತ ಹೇಳ್ಬೇಕು ಅನ್ನಿಸಿದ್ರೆ  ನೇರವಾಗಿ ಅವರಿಗೆ ಹೇಳಿ. ......
ಕಳೆದು ಹೋಗಿದ್ದು ತಿರುಗಿ ಬಾರದು ಮತ್ತೆ. ಮರೆಯೋದ್ರಿಂದ ಆಗೋ ಲಾಭನು ಏನು ಇಲ್ಲ....

I miss all those who touched ma heart.... <3


sathya...,

No comments:

Post a Comment