Tuesday 12 November 2013

ತಾರೆ....



ಹುಣ್ಣಿಮೆಯಂದೂ ಚಂದ್ರನೆಕೋ ಮುನಿಸಿಕೊಂದಿದ್ದಾನೆ,
ಕರಿ ಮುಗಿಲ ಬಾನೂ ನನ್ನ ಮನಸ್ಸನ್ನೇ ಪ್ರತಿಫಲಿಸಿದಂತಿದೆ,
ಚುಕ್ಕಿ ತಾರೆಗಳೆಲ್ಲವೂ ಅಲ್ಲೊಂದು ಇಲ್ಲೊಂದು ಇಣುಕಿದಂತಿದೆ,
ನಿನ್ನ ನೆನಪುಗಳೆಲ್ಲವೂ ಹಾಗೆ ಒಂದೊಂದಾಗಿ ಮಿಂಚಿ ಮರೆಯಾಗುತ್ತಿವೆ,

ಕೈಗೆಟುಕದ ತಾರೆಗೆ ಆಸೆಪಟ್ಟಿದ್ದು ನನ್ನದೇ ತಪ್ಪಿರುವಂತಿದೆ,
ಕತ್ತಲ ಬಾನಲ್ಲಿ ಮಿನುಗುವುದ ಕಂಡು ನಾ ಮಾರುಹೋದೆ,
ಇನ್ನೇನು ಕೈಗೆಟುಕುವುದೆಂಬ ಕನಸ ನಾ ಕಂಡಿದ್ದೆ,
ಮೋಡ ಬಂದಾಗ ನೀ ಮರೆಯಾಗುವೆ ಎಂಬುದ ನಾ ಅರಿಯದೆ ಹೋದೆ.

ನೀನಿರುವುದೋ ಸಾವಿರ ಸಾವಿರ ಜ್ಯೋತಿರ್ವರ್ಷಗಳಷ್ಟು ದೂರ,
ಅದರೂ ಈ ಕಣ್ಣಿಗೆ ಕಾಣುವಷ್ಟು ಹತ್ತಿರ,
ಆ ದೇವರನ್ನು ಕೇಳುವುದು ಒಂದೇ ಒಂದು ವರ,
ಮತ್ತೆ ಮೋಡವ ತಂದು ಹೆಚ್ಚಿಸದಿರು ನಮ್ಮ ನಡುವಿನ ಅಂತರ,

ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳುವೆ ಆ ನಿನ್ನ ಹೊಳೆಯುವ ಮೊಗವ...,

No comments:

Post a Comment