ಸ್ಮಾರ್ಟ್ ಫೋನ್.... ಅನ್ನೋ sexy ಲೇಡಿ...
ಇದನ್ನ ತಮಾಷೆಗಾಗಿ ಬರೆದಿದ್ದು, ನನ್ನೊಬ್ಬ ಫ್ರೆಂಡ್ ಏನಾದ್ರು ಡಿಫರೆಂಟ್ ಆಗಿ ಬರಿ ಅಂದ ಅದಕ್ಕಾಗಿ ಒಂದು ಸಣ್ಣ try ಅಷ್ಟೇ.
ಇದನ್ನ ತಮಾಷೆಗಾಗಿ ಬರೆದಿದ್ದು, ನನ್ನೊಬ್ಬ ಫ್ರೆಂಡ್ ಏನಾದ್ರು ಡಿಫರೆಂಟ್ ಆಗಿ ಬರಿ ಅಂದ ಅದಕ್ಕಾಗಿ ಒಂದು ಸಣ್ಣ try ಅಷ್ಟೇ.
ಏನು ಈ ತರ ತಲೆಬರಹ ಕೊಟ್ಟಿದೀನಿ
ಅನ್ಕೊಂಡ್ರ. smart ಫೋನ್ ಅಂದ ಕೂಡಲೇ ಎಲ್ರು ಒಂದ್ಸಲ ನಿಮ್ ನಿಮ್ ಜೇಬಿಗೆ ಕೈ ಹಾಕಿ ಫೋನ್
ಇದಿಯಾ ಅಂತ ನೋಡ್ಕೊಂಡ್ರ..!! ಸರಿ ಮುಂದೆ ಕೇಳಿ ನನ್ ಪಿಟೀಲ್ ನ....
ಈಗಂತೂ ಯಾರ ಕೈಲಿ ನೋಡಿದ್ರು smart phones.
ಜೇಬಲ್ಲಿ 10 ರೂಪಾಯಿ ಇರತ್ತೋ ಇಲ್ವೋ, ಸಿಮ್ ಕಾರ್ಡ್ ಲಿ ನಯಾ ಪೈಸೆ balance ಇರತ್ತೋ ಇಲ್ವೋ
ಗೊತ್ತಿಲ್ಲ but ಕೈಲಿ ಮಾತ್ರ ಫೋನ್ ಇರಲೇಬೇಕು. ಕೆಲವರಿಗೆ prestige ವಿಷ್ಯ ಆದರೆ. ಇನ್ನ
ಕೆಲವರಿಗೆ ಸುಮ್ನೆ ...... ಕ್ಕೆ ಅಷ್ಟೇ.
ಪಕ್ಕದಲ್ಲಿ ನಿಂಬೆ ಹಣ್ಣಿನಂತ ( ಕೇವಲ
punchಗಾಗಿ ಬಳಸಿದ್ದು) ಹುಡುಗಿ ಇದ್ರೂ ನಿಮಿಷಕ್ಕೊಂದ್ಸಲ ಜೇಬಲ್ಲಿರೋ smart ಹುಡುಗಿನ ನೋಡಿಲ್ಲ
ಅಂದ್ರೆ ಸಮಾಧಾನ ಇರಲ್ಲ. ಅವುಗಳು ನೋಡೋಕೆ ಬೇರೆ ಒಳ್ಳೆ ತೆಳ್ಳಗೆ ,ಬೆಳ್ಳಗೆ, handy ಆಗಿ ಇರ್ತವೆ. ಇನ್ನು ಅದು ಸ್ವಿಚ್ ಆಫ್ ಆಗಿದ್ರೂ
ಒಂದ್ಸಲ screen ಟಚ್ ಮಾಡಿ ನೋಡೋದು. ಸತ್ತು ಹೋದೋರ ಮುಂದೆ ಕುತ್ಕೊಂಡು ಅಳ್ತಾರಲ್ಲಾ ಹಾಗೆ. ಅದು
on ಆಗಲ್ಲ , ಇವ್ರು ಬಿಡಲ್ಲ.
ಅದಕ್ಕೆ ತಕ್ಕಂತೆ ನಮ್ ಗೂಗಲ್ ಮಹಾರಾಜರು
develop ಮಾಡಿರೋ android ಬೇರೆ. ಅದಕ್ಕೆ ಸಪೋರ್ಟ್ ಮಾಡೋ ಲಕ್ಷಾಂತರ ಬಿಟ್ಟಿ
apllicationಗಳು. ಯುವಜನತೆ ಎಲ್ಲಾ ಈ SMS ಅನ್ನೋ ಬೂತದಿಂದ ಹಾಳಾಗಿ ಹೋಗ್ತಾರೆ ಅಂತ TRAI
ಅವ್ರು SMS ನ stop ಮಾಡಿದ್ರೆ. whatsapp ಬಂದು ಎಲ್ರುನ್ನು ಮತ್ತೆ whats_up ಅನ್ನೋ ಹಾಗೆ ಮಾಡಿದೆ. ಇನ್ನ LINE app line
ಹೊಡಿಯೋರ್ಗೆ ಹೇಳಿ ಮಾಡ್ಸಿದ್ ಹಾಗೆ ಇದೆ. ಇನ್ನೂ ಆ temple ಇಂದ ಓಡಿ ಹೋಗೋ , ಕೋಳಿ
ಮೊಟ್ಟೆ ಒಡಿಯೋ
ಆಟ ಎಲ್ರ ಹಾಟ್ fevt. ತಿನ್ನೋಕೆ ಹಣ್ಣು ಕೊಟ್ರೆ ಮುಖ ಇನ್ನೊಂದ್ ಕಡೆ ತಿರುಗಿಸೋ ಮಕ್ಳು, FRUIT NINJA ಹಾಕಿ ಕೊಟ್ರಂತು ಹೊಟ್ಟೆ ತುಂಬೋವಷ್ಟು ಆಡ್ತಾವೆ.
ಆಟ ಎಲ್ರ ಹಾಟ್ fevt. ತಿನ್ನೋಕೆ ಹಣ್ಣು ಕೊಟ್ರೆ ಮುಖ ಇನ್ನೊಂದ್ ಕಡೆ ತಿರುಗಿಸೋ ಮಕ್ಳು, FRUIT NINJA ಹಾಕಿ ಕೊಟ್ರಂತು ಹೊಟ್ಟೆ ತುಂಬೋವಷ್ಟು ಆಡ್ತಾವೆ.
ಹೋಗೋ ಟೈಮ್ ಅಲ್ಲಿ ದೇವರ ನಾಮ ಕೇಳ್ಕೊಂಡು,
ಮೊಮ್ಮಕ್ಳು ಜೊತೆ ಆಡ್ಕೊಂಡು ಇರೋ ಮುದುಕರನ್ನು ಮೋಡಿ ಮಾಡೋವಂತ addಗಳು. ಇನ್ನು ನಮ್ಮಂತ ಬಿಸಿ ರಕ್ತ ಕೊತ ಕೊತ ಕುದಿತಿರೋ ಹೈಕಳು
ಸುಮ್ನಿದ್ರೆ ಆಗತ್ತಾ!!!!!!! ಕೈಲಿ ಒಂದು smart ಫೋನ್ ಇದ್ರೆ ಸಾಕು ನಾವು ತುಂಬಾ smart
ಅನ್ನೋ ಮನೋಭಾವನೆ.
ಸ್ವಲ್ಪ ಒಗ್ಗರಣೆ::
ಇಷ್ಟೆಲ್ಲಾ ಹೇಳಿದ್ಮೇಲೆ ನಾನೂ ಸುಮ್ನಿದ್ರೆ
ಆಗುತ್ತಾ...!!!( ಬಿಸಿ ರಕ್ತ ಬೇರೆ – ಆದ್ರೆ ಜಾಸ್ತಿ
ಕುದೀತ ಇಲ್ಲ) ಕೈ ಕೈ ಹಿಡ್ಕೊಂಡು ಹೋಗೋ ಹುಡುಗಿ ಸಿಗ್ತಾಳೋ ಇಲ್ವೋ ಗೊತ್ತಿಲ್ಲಾ ಸಧ್ಯಕ್ಕೆ but
ಕೈಲಿ ಹಿಡ್ಕೊಂಡು ಹೋಗೋ ಒಂದು sexy lady ನಾದ್ರೂ ತಗೋಳೋದು ಬೇಡ್ವ.......????!!!!!
ಏನಂತೀರಾ...???
No comments:
Post a Comment