ಇಂದು – ಅಂದು::
ಹೀಗೆ ಎಂಟು ತಿಂಗಳ ಹಿಂದೆ fb ನಲ್ಲಿ ಒಂದು
ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯಾರದು ಅಂತ ನೋಡಿದ್ರೆ ನನ್ನ ಒಬ್ಬ ಹಳೇ ಸ್ನೇಹಿತನದ್ದು. ಅದೂ
ಸುಮಾರು 8 ವರ್ಷಗಳ ನಂತರ. ತಕ್ಷಣಕ್ಕೆ
ಗುರುತಿಸಿದೆನಾದರು ಆಶ್ಚರ್ಯ ಆಗಿತ್ತು. ಈ fb ಎಂಬ ಪ್ರಪಂಚದಲ್ಲಿ ಅದೂ 8 ವರ್ಷಗಳ ನಂತರಾನು
ನೆನಪಿಟ್ಟುಕೊಂಡು ರಿಕ್ವೆಸ್ಟ್ ಕಳಿಸಿದ್ದನ್ನ ಕಂಡು ಖುಷಿಯಾಗಿತ್ತು. ನಾವಿಬ್ಬರು ಒಂದರಿಂದ ಏಳನೇ
ತರಗತಿವರೆಗೆ ಒಟ್ಟಿಗೆ ಓದಿದವರು. ನಮ್ಮಿಬ್ಬರ ಸ್ನೇಹ ಶಾಲೆಯಲ್ಲಷ್ಟೇ ಅಲ್ಲ ,ಊರಿನಲ್ಲೂ ಸ್ವಲ್ಪ
ಫೇಮಸ್ ಅಂತಾನೆ ಹೇಳಬಹುದು. ವೀಕೆಂಡ್ಸ್ ಬಂದ್ರೆ ಸಾಕು ನಾನು ಅವ್ರ ಮನೇಲಿ ಹಾಜರ್. ನಂಗೆ
ಬೆಕ್ಕುಗಳೆಂದರೆ ಇಷ್ಟ. ಅವ್ರ ಮನೆ ತುಂಬಾ ಬೆಕ್ಕುಗಳಿದ್ದವು. ಅದಕ್ಕೋಸ್ಕರ ಹೋಗ್ತಿದ್ದೆ. ಅವ್ರ
ಮನೆ ಮುಂದೆ ಅಡಿಕೆ ತೋಟ . ಅಲ್ಲಿ ಒಂದು ಓಪನ್ ಬಾವಿ. ಎಲ್ಲಾ ಕಾಲದಲ್ಲೂ ತುಂಬಿ ಹರಿಯುತ್ತಾ
ಇರ್ತಿತ್ತು. ಇಬ್ರು ಅದ್ರಲ್ಲಿ ಮೀನು ಹಿಡಿತಿದ್ವಿ and ತೋಟದಲ್ಲಿ ಮಾವಿನ ಮರ,ಪೇರಲೆ ಮರ ಇದ್ವು
. ಇದ್ಮೇಲೆ ಕೇಳ್ಬೇಕ ಕಾಲಕಾಲಕ್ಕೆ ಹಣ್ಣುಗಳು ಸಿಗ್ತಾ ಇದ್ವು.
ಅವ್ನು ಕಳ್ಸಿದ್ ರಿಕ್ವೆಸ್ಟ್ accept
ಮಾಡಿದ್ಮೇಲೆ ನಂಬರ್ ಇಸ್ಕೊಂಡು ಕಾಲ್ ಮಾಡಿದೆ. ಕೇಳ್ದೆ ನನ್ನ ಹೇಗೆ ಹುಡುಕಿದೆ ಅಂತ. ಅವ್ನು
ಹೇಳಿದ್ ಕೇಳಿ ಏನ್ ಹೇಳಬೇಕೋ ಗೊತ್ತಾಗ್ಲಿಲ್ಲ. ಅವ್ನ ಫ್ರೆಂಡ್ ಯಾರೋ ಹೇಳಿದರಂತೆ fb ನಲ್ಲಿ
ಅಕೌಂಟ್ create ಮಾಡಿದ್ರೆ ಹಳೇ ಫ್ರೆಂಡ್ಸ್ ನೆಲ್ಲಾ ಹುಡುಕಬಹುದು ಅಂತ. ಅದಕ್ಕೋಸ್ಕರ ಅಕೌಂಟ್
create ಮಾಡಿ ನನ್ನ ಹೆಸರಿನ ಎಲ್ಲಾ combination ಹುಡುಕಿ ನಂಗೆ ರಿಕ್ವೆಸ್ಟ್ ಕಳಿಸಿದ್ದ. ನಾನು
fb ಅಕೌಂಟ್ ಓಪನ್ ಮಾಡಿ 4 ವರ್ಷ ಆದರೂ ಒಂದಿನ
ಅವನನ್ನ search ಮಾಡಿರಲಿಲ್ಲ .
ಅವ್ನ ಮಾತು, ಅವನಿಗೆ ನನ್ ಮೇಲೆ ಇದ್ದ ಆ ಸ್ನೇಹ
ಇನ್ನು ಹಾಗೆ ಇತ್ತು. ಅವ್ನ ಮಾತಿನ ಶೈಲಿನೂ ಅಷ್ಟೇ.
ಆಗ ನಂಗೆ ಅನ್ನಿಸ್ತು ನಾನು ಎಷ್ಟು ಚೇಂಜ್
ಆಗಿದೀನಿ ಲೈಫ್ ನಲ್ಲಿ. ಅವ್ನು ನಾನು almost ಒಂದೇ ತರ mentality ಹೊಂದಿದ್ವಿ . ಆದ್ರೆ ಈಗ
ನಾನು ತುಂಬಾ ಬದಲಾಗಿದೀನಿ ಅನ್ನಿಸ್ತು.
ಹೀಗೆ ನೆನ್ನೆ ಇನ್ನೊಬ್ಬ ಫ್ರೆಂಡ್ ನನ್ ನಂಬರ್
ಕೇಳಿ ಕಾಲ್ ಮಾಡಿದ್ದ . ಅವ್ನು ಅಷ್ಟೇ ಬಹುಶಃ 9 ವರ್ಷ ಆಗಿರಬಹುದು ಅವನನ್ನ ನೋಡದೆ. ಅದಕ್ಕೋಸ್ಕರ
fb ಗೆ ಧನ್ಯವಾದಗಳನ್ನ ಹೇಳಲೇಬೇಕು.
ಯಾಕೆ ಈ ಕಥೆ ಹೇಳ್ದೆ ಅಂದ್ರೆ. ಅವಾಗ ಜೀವನ
ಅಂದ್ರೆ ಏನು, ಸ್ನೇಹ ಅಂದ್ರೆ ಏನು ಅಂತ
ಗೊತ್ತಿಲ್ದೆ ಇದ್ದ ವಯಸ್ಸಿನಲ್ಲಿ ಆದ ಸ್ನೇಹ ಇನ್ನು ಹಾಗೆ ಇದೆ. ಆದ್ರೆ ಪ್ರಪಂಚ ಜ್ಞಾನ ಬಂದ
ಮೇಲೆ ಆದ ಸ್ನೇಹ, ಸ್ನೇಹಿತರು, ಅವ್ರ ಜೊತೆಗಿದ್ದ ದಿನಗಳು , ನನ್ನ ನೋವು – ನಲಿವನ್ನೆಲ್ಲ ಹಂಚಿಕೊಂಡು, ಒಂದೇ ಜೀವ
ಎರಡು ದೇಹ ಅನ್ನೋ ಹಾಗೆ ಇದ್ದ ಸ್ನೇಹ. 24*7 ಮೆಸೇಜ್ , ಕಾಲ್ , missed ಕಾಲ್ಸ್ ,forward
messages, ಎಲ್ಲಾ ಕೇವಲ ಕೆಲವೇ ತಿಂಗಳುಗಳ ಅಂತರದಲ್ಲಿ ನೆನಪುಗಳ ಪುಟ ಸೇರಿಯಾಗಿದೆ. ಒಂದು
underwear ತಗೊಂಡರು ಶೇರ್ ಮಾಡ್ತಾ ಇದ್ದ ಸ್ನೇಹಿತರು ಈಗ ಏನಾದ್ರು important ಅನ್ನೋ ವಿಷ್ಯಾನು
ತುಂಬಾ ಲೈಟ್ ಆಗಿ ಹೇಳೋದನ್ನ ನೋಡಿದ್ರೆ ಏನೋ ಒಂತರ ಅನ್ನಿಸಿಬಿಡತ್ತೆ. ಸಮಯ ಸವೆದಂತೆಲ್ಲಾ ಈ
ಸ್ನೇಹ ಅನ್ನೋ ಸಂಬಂಧ ತುಕ್ಕು ಹಿಡಿದ ಕಬ್ಬಿಣದಂತಗ್ತಾ ಇರೋದನ್ನ ನೋಡಿದ್ರೆ ಏನು ಹೇಳಬೇಕೋ
ಗೊತ್ತಾಗಲ್ಲ.
ನನ್ಮುಂದೆ ಬರೋ ಇನ್ನೊಂದು ಪ್ರಶ್ನೆ ಅಂದ್ರೆ.
ಹೊಸಬರು ಲೈಫ್ ಗೆ entry ಆದಕೂಡಲೇ ಹಳೆದೆಲ್ಲಾ ಅಷ್ಟು easyಯಾಗಿ ಮರೆಯೋಕೆ ಸಾಧ್ಯನ ಅನ್ನೋದು..??!!.
ಏನಾದ್ರು ಆಗ್ಲಿ ನನ್ ಫ್ರೆಂಡ್ಸ್ ನಂಗೆ ಬೇಕು ಅಂತ ಸುಮಾರು ಸ್ನೇಹಿತ /ತೆ ಯರುಗಳಿಗೆ ಕಾಲ್ ಮಾಡಿದೆ. ಎಲ್ಲರಿಂದ ಬಂದ ಉತ್ತರ. “ಏನು ಇಲ್ಲ, ಲೈಫೇ ಬೇಜಾರು, ಯಾರ್ friendship ಬೇಡ, ಯಾವ ಸಂಬಂಧಾನು
ಬೇಡ, ಆರಾಮಾಗಿ ಇದೀನಿ , ಎಲ್ರು ಅವರವರ ಲೈಫ್ ಲಿ ಬ್ಯುಸಿ, ಯಾಕೆ disturb ಮಾಡೋದು
...............” . ಒಂದೇ
ಉಸಿರಲ್ಲಿ ಎಷ್ಟೆಲ್ಲಾ ಹರಟೆ ಹೊಡಿತ ಇದ್ದೋರು. ಈಗ ಫ್ರೆಂಡ್ ship ಬೇಡ ಅಂತಿದಾರೆ ಅಂದಾಗ, ನಾನೇ
ಕಾಲ್ ಮಾಡಿ ತೊಂದರೆ ಕೊಟ್ನೇನೋ ಅನ್ನಿಸ್ತು. ಎಲ್ಲಾ
ಮರಿಬೇಕು ಅಂದುಕೊಂಡೋರಿಗೆ ಮತ್ತೆ ನನ್ನ ನೆನಪು ಮಾಡಿ ಕೊಟ್ನೇನೋ ಅನ್ನಿಸ್ತು.
ಅದೇನೇ ಇರಲಿ ......ಬದಲಾವಣೆ ಅನ್ನೋದು
natural. ಅದು ಕಾಲಕ್ಕೆ ತಕ್ಕಂತೆ ಆಗ್ತಾನೆ ಇರತ್ತೆ . ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು. ಆಗ
ಈ ತರ ಯಡವಟ್ಟು ಪ್ರಶ್ನೆಗಳು ಯಾವುದು ಹುಟ್ಟಲ್ಲ ಅನ್ಸುತ್ತೆ.
ಏನಂತೀರಾ..............................???
No comments:
Post a Comment