ಹನಿಗವನಗಳು.....
ನಿನ್ನ ಸುತ್ತ ನಾ ಸುತ್ತಲಿಲ್ಲ ನಿಜ,
ಆದರೆ ಈ ನನ್ನ ಮನ ನಿನ್ನ ಸುತ್ತಾನೆ ಗಿರಗಿಟ್ಲೆ
ಹೊಡೀತಿತ್ತು,
ಮೊದಲೇ ನಾ ನಿನಗೆ ಸಿಗಬಾರದಿತ್ತೆ ಅಂತ ಅನಿಸಿದ್ದು
ನಿಜ,
ಸಿಕ್ಕರೂ ನೀ ನನ್ನ ಒಪ್ಪುತ್ತಿಯಾ ಅಂತ ಅನುಮಾನ ಕಾಡಿತ್ತು,
ನಿನ್ನ ಅರಿವಿಗದು ಬಾರದಿರಬಹುದು- ನಿಜ,
ಬಂದರೂ ನಟಿಸುತ್ತಿದ್ದೆಯೇನೋ ನನಗೇನು ಗೊತ್ತು..
ಎಲ್ಲಾ ಹೇಳಬೇಕೆಂದಿದ್ದೆ ನಿಜ,
ನೀ ತಿರಸ್ಕರಿಸಿದರೆ ಎಂಬಾ ಭಯವೂ ಇತ್ತು,
ಕೊನೆಗೂ ಹೇಳಬೇಕೆಂದು ನಿರ್ಧಾರವೇನೋ ಮಾಡಿದ್ದೆ ನಿಜ,
ಅಷ್ಟರಲ್ಲಾಗಲೇ
ಕಾಲವೆಂಬುದು ಮಿಂಚಿ ಹೋಗಿತ್ತು........
------------------------------------------------------------------------------------------
ಹೊರಲಾರದಷ್ಟು ಭಾರ ಹೊರೆಸಿದ್ದೀಯ,
ಕೆಳಗಿರಿಸಬಾರದೆಂದೇನಿಲ್ಲಾ,
ಕೆಳಗಿಳಿಸಿದರೆ ಎಲ್ಲಿ ಕಳೆದುಕೊಳ್ಳುತ್ತೇನೋ ಎನ್ನುವ
ಭಯ,
ಭಾರದ ಅಡಿ ಬಿದ್ದು ಕೊನೆಯುಸಿರೆಳೆದರೂ
ಚಿಂತೆಯಿಲ್ಲಾ,
ನಾ ಹೋದರೆ ನಿನ್ನ
ನನ್ನಷ್ಟು ಇಷ್ಟ ಪಡುವವರು ಯಾರು ಅನ್ನುವ ಸಂಶಯ,..!!
-------------------------------------------------------------------------------------------
ನನ್ನ ಮತಿಗಿಂದು ಮರೆಗುಳಿಗೆ ಬೇಕಿದೆ
ನಿನ್ನ ನೆನಪುಗಳ ಮರೆಯುವ ಸಲುವಾಗಿ,
ನನ್ನ ಮನದಲ್ಲಿ ಒಂದು ಪುಟ್ಟ ಗುಡಿ
ಕಟ್ಟಬೇಕಿದೆ,
ನೀ ಕೊಟ್ಟ ಪ್ರೀತಿಯ ಸಲುವಾಗಿ...
No comments:
Post a Comment